ಇಂಜಿನಿಯರಿಂಗ್‌ನ study holidays ಸಮಯ. semester ಶುರು ಆದಾಗಿನಿಂದ ಓದಿಲ್ಲದಿರುವುದನ್ನೆಲ್ಲ ಓದುವ ಸಮಯ. ಮೊದಲನೆಯ semester ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಮೊದಲ internals ನಿಂದಲೆ ಓದಲು ಶುರು ಮಾಡಿರುತ್ತಾರೆ. ಬಹಳಷ್ಟು ಮಂದಿ ಮೊದಲನೆ semester ನಲ್ಲಿ ತಮ್ಮ ಸರಾಸರಿಯನ್ನು ಹೆಚ್ಚಿಸಿಕೊಳ್ಳಲು ಮೂರನೆ internals ಬರೆದಿರುತ್ತಾರೆ. ೨೧-೨೨ ಇರುವವರು ೨೩-೨೪ ಮಾಡಿಕೊಳ್ಳಲು, ೨೫ ಇರುವವರು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮೂರನೆಯದರಲ್ಲು ೨೫ ತೆಗೆಯಲು ಬರೆದಿರುತ್ತಾರೆ! ಅವರಲ್ಲಿ ಖಡಾಖಂಡಿತವಾಗಿಯು ಬಹಳಷ್ಟು ಮಂದಿಗೆ ಪ್ರತಿ semester ಗಳ ಬಳಿಕ ಒದುವ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ, ಉದಾಹರಣೆಗೆ ಎರಡನೆ semester ನಲ್ಲಿ ಅದು ೧೮-೧೯ ರಿಂದ ೨೦-೨೧ ಕ್ಕೆ ಏರಿಸಿಕೊಳ್ಳಲು ಬರೆಯಬಹುದು! ಹೀಗೆ semester ಕಳೆಯುತ್ತಾ ಮೂರನೆ internals ನಲ್ಲಿ ತಮ್ಮ ಸರಾಸರಿಯನ್ನು ಪ್ರಶಸ್ತವಾದ ಕನಿಷ್ಟ ಅಂಕೆ ೧೫ಕ್ಕೆ ಏರಿಸಲು ಬರೆಯಬಹುದು. ಆದರೆ ಕೆಲುವು ಕಾಲೇಜುಗಳಲ್ಲಿ ನನ್ನತಃ ವಿದ್ಯಾರ್ಥಿಗಳಿಗೆ ಸರಾಸರಿಯನ್ನು ೧೫ಕ್ಕೆ ಏರಿಸಲು ನಾಲ್ಕನೆ internals ಕೂಡ ಕೊಡುತ್ತಿದ್ದರು! ಅದರಲ್ಲು ಬಹಳಷ್ಟು ಮಂದಿ ನಾಲ್ಕನೆ internals ನಲ್ಲೂ ೧೫ ಮುಟ್ಟಲಾಗದೆ externals ನಲ್ಲಿ ನೋಡಿಕೊಳ್ಳೋಣ ಎಂದು ಸುಮ್ಮನಾಗುತ್ತಿದ್ದರು! ಇಂಥಾ ಸಂದರ್ಭಗಳನ್ನು ಎದುರಿಸಲು ನಮಗಿದ್ದ ದಾರಿಯೆ study holidays! ೩ ವಾರಗಳ ಕಾಲ ರಜೆ ಇರುತ್ತಿದ್ದ ಸಮಯದಲ್ಲಿ ಒಂದೆ ಸಮನೆ ಓದಿ, ಎಲ್ಲವನ್ನು ತಲೆಗೆ ತುರುಕಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆಯುವುದೇ ಎಲ್ಲರ ಗುರಿ. ಈ ಸನ್ನಿವೇಶದಲ್ಲಿ ಒಳ್ಳೆಯ ಅಂಕ ಎಂದರೆ ಒಬ್ಬೊಬ್ಬರಿಗು ಬೇರೆಯದೆ ಆಗಿರುತ್ತದೆ, ೯೫-೯೦-೮೦-೭೦-೬೦ ಇದು ಬೆರಳೆಣಿಕೆಯ ಪಂಕ್ತಿ! ಬಹಳಷ್ಟು ಮಂದಿಗೆ Externalsನಲ್ಲಿ ಪ್ರಶಸ್ತವಾದ ಅಂಕೆಯೆಂದರೆ ೩೫!
ನಾನು ಈ ಮೊದಲೆ ’ಫಿನಾಯಿಲ್’ ನಲ್ಲಿ ಹೇಳಿದ್ದ ಹಾಗೆ study holidays ನಲ್ಲಿ ಓದುವುದಕ್ಕೆ ನಮ್ಮದೆ ಆದ ಪರಿಮಿತಿಯನ್ನು ನಮಗೆ ಸೃಷ್ಟಿಸಿಕೊಂಡಿರುತ್ತೇವೆ. ನಿಜವಾಗಿಯೂ ನಮ್ಮ ದೇಹಕ್ಕೆ, ತಲೆಯ ಸ್ಥಿರತೆಗೆ ಯಾವುದೇ ಹಾನಿಯಾಗುವುದಿಲ್ಲವಾದರು ಆ ಪರಿಮಿತಿಯನ್ನು ನಾವು ದಾಟುವುದೇ ಇಲ್ಲ. ಅದಕ್ಕೆ ಬಹಳಷ್ಟು ಮಂದಿ ಕೊಡುವ ಕಾರಣ "Mind refreshment"! ಈ mind refreshment ಗು ಸಹ ಅವರವರಿಗೆ ಅವರವರ ದಾರಿ/ದಾರಿಗಳು ಇರುತ್ತವೆ. ನನಗೆ ಇದ್ದ ದಾರಿಗಳೆಂದರೆ ನನ್ನ ಗಣಕಯಂತ್ರದಲ್ಲಿ ವಿಧವಿಧವಾದ ಆಟಗಳನ್ನು ಆಡುವುದು, ಯಾವುದಾದರು ಸಿನಿಮಾ ನೋಡುವುದು ಅಥವಾ ಇವೆರಡಕ್ಕಿಂತ ಆದ್ಯತೆ ಪಡೆದ "ಹರಟೆ"! ಈ ಹರಟೆಯಲ್ಲಿ ಸೇರುತ್ತಿದ್ದುದು ನಾನು ಮತ್ತು ನನ್ನ ಆಪ್ತಮಿತ್ರರಾದ ವಿಜಯ್, ಹೇಮಂತ್ ಹಾಗು ಸಂತೋಷ್. ಸೋಜಿಗವೆಂದರೆ ಯಾರೂ ಓದಿನ ಬಗ್ಗೆ ಜಾಸ್ತಿ ಹರಟುತ್ತಿರಲಿಲ್ಲ! ಶಾಸ್ತ್ರಕ್ರಮವೆಂಬಂತೆ, ಸೇರಿದಾಗ ಸುಮ್ಮನೆ "ಎಷ್ಟು ಮುಗಿಸಿದೆ", "ಎಷ್ಟು ಪ್ರಶ್ನೆಗಳಿಗೆ ತಯಾರಾಗುತ್ತಿದ್ದೀಯ" ಎಂದು ಕೇಳುತ್ತಿದ್ದೆವು. ತದ ನಂತರ ನಮ್ಮದೇ ಲೋಕದಲ್ಲಿ ಮುಳುಗುತ್ತಿದ್ದೆವು. ಕಡಿಮೆ ಎಂದರೆ ೩-೪ ಗಂಟೆಗಳ ಕಾಲ ಹರಟೆ ಹೊಡೆಯುತ್ತಿದ್ದೆವು. ಹರಟೆ ಹೊಡೆಯಲು ಸೇರುತ್ತಿದ್ದ ಸ್ಥಳಗಳೆಂದರೆ ನಮ್ಮ ಬಡಾವಣೆಯ ಹೊರಗಿದ್ದ ಆಲದ ಮರ, ನಮ್ಮ ಬಡಾವಣೆಯ water tank (ನನಗೆ ಈಗಲು 3-idiots ಸಿನಿಮಾ ಮೇಲೆ ಅಸೂಯೆ! ನಮ್ಮ ಈ ಕಾಲಹರಣ ಪದ್ಧತಿಯನ್ನು ಭಟ್ಟಿ ಇಳಿಸಿದಕ್ಕೆ!) ಹಾಗು ನಮ್ಮ ಬಡಾವಣೆಯ ಉದ್ಯಾನವನದ ಧ್ವಜಸ್ತಂಭ. ಕೆಲುವು ದಿನ ಮನೆಯಲ್ಲಿ ಯಾರು ಇಲ್ಲದಿದ್ದರೆ ನಮ್ಮ ಮನೆಗಳೆ ಹರಟೆಯ ತಾಣವಾಗುತ್ತಿತ್ತು. ಹೀಗೆ ಒಂದು ದಿನ ವಿಜಯ್ ಮನೆಯ ಮುಂದಿನ ಪಡಸಾಲೆಯಲ್ಲಿ ಹರಟೆಗೆ ಕುಳಿತ್ತಿದ್ದೆವು. ವಿಜಯ್‌ಗೆ ಮನೆಯಲ್ಲಿರಬೇಕಾದರೆ ಪಂಚೆ - ಬನಿಯನ್ ನಲ್ಲಿರುವುದು ಅಭ್ಯಾಸ. ಇದನ್ನು ಇಲ್ಲೇಕೆ ಪ್ರಸ್ತಾಪಿಸಿದ್ದೇನೆ ಎಂದು ಸ್ವಲ್ಪದರಲ್ಲೆ ತಿಳಿಯುತ್ತದೆ. ವಿಜಯ್ ಮನೆಯಲ್ಲಿ ನಾವು ಹರಟೆಗೆ ಕುಳಿತರೆ ನಮ್ಮ ಜೊತೆ ಅವರ ನಾಯಿ blacky ಕೂಡ ಕೂರುತ್ತಿತ್ತು! ನಾವಾಡುವ ಮಾತುಗಳು ಅದಕ್ಕೆ ಎಷ್ಟು ಅರ್ಥವಾಗುತ್ತಿತ್ತೊ ಏನೋ ನಮಗೆ ತಿಳಿಯದು. ಆದರೆ ಬಹಳ ಖುಷಿಯಿಂದಲೆ ನಮ್ಮನ್ನು ಆಲಿಸುತ್ತಿತ್ತು. ಸಧ್ಯ ನಾಯಿಗಳಿಗೆ ದೂರುವ ಪ್ರತಿಭೆ ಇಲ್ಲ. ಇದ್ದಿದ್ದರೆ ನಮಗೆ ಎಷ್ಟು ಗ್ರಹಚಾರ ಕಾದಿರುತ್ತಿತ್ತೋ!
ವಿಜಯ್ ಮನೆಮುಂದಿನ ಪಡಸಾಲೆಯಿಂದ gate ತನಕ ಸುಮಾರು ೧೫ ಅಡಿ, ಅಷ್ಟುದ್ದಕ್ಕು ಸುಮಾರು ೪-೫ ಅಡಿ ಅಗಲಕ್ಕೆ ಗಾರೆ ನೆಲ. ಗಾರೆ ನೆಲದ ಪಕ್ಕ ಹೂದೋಟ. ನಾವೆಲ್ಲಾ ಹೀಗೆ ಮಾತನಾಡುತ್ತ ನಮ್ಮ ಲೋಕದಲ್ಲಿ ನಾವು ಮುಳುಗಿದ್ದೆವು. Gate ತುದಿಯಿಂದ ನಮ್ಮ ಹತ್ತಿರಕ್ಕೆ ಒಂದು ಹಾವಿನ ಮರಿ ತೆವಳಿ ಬಂದಿತ್ತು! ನಾವು ನಮ್ಮ ಮಾತಿನಲ್ಲಿ ಎಷ್ಟು ಮುಳುಗಿದ್ದೆವೆಂದರೆ ಈ ಹಾವು ನಮ್ಮ ಪಕ್ಕ ಬರುವ ತನಕ ಒಬ್ಬರಿಗು ಅರಿವಾಗಿರಲಿಲ್ಲ. ನಮ್ಮನ್ನು ಬಿಡಿ ಮನುಷ್ಯರದ್ದು ಇದೇ ಗೋಳು, ಆದರೆ ನಮ್ಮ ಜೊತೆ ಕುಳಿತಿದ್ದ blacky ಗಾದರು ಗೊತ್ತಾಗಬಾರದೆ! ಅದೂ ಕೂಡ ನಮ್ಮ ಮಾತಿನಲ್ಲಿ ನಮ್ಮ ಜೊತೆ ಆ ಮಟ್ಟಿಗೆ ಮುಳುಗಿತ್ತು! ಹಾವನ್ನು ಮೊದಲು ನೋಡಿದವನು ಹೇಮಂತ್. ಅವನಿಗೆ ಹಾವು ಎಂದು ಕಿರುಚಲೂ ಆಗಿರಲಿಲ್ಲ! ಹಾವಿನ ಕಡೆ ಕೈ ತೋರಿಸಿ "ವಿಜಯ್ ವಿಜಯ್" ಎಂದು ಕಿರುಚುತ್ತ ನೆಲದ ಮೇಲೆ ತರಾವರಿ ನೃತ್ಯ ಮಾಡಿದ! ಎಲ್ಲರು ಹಾವಿನ ಕಡೆ ನೋಡಿ, ಹಾವು ನಮ್ಮೆಡೆಗೆ ಬರುತ್ತಿದೆ ಎಂದು ಹೊಳೆದು ಅದಕ್ಕೆ ಪ್ರತಿಕ್ರಿಯಿಸಲು ಸಾಮಾನ್ಯ ಸಮಯಕ್ಕಿಂತ ಸ್ವಲ್ಪ ಜಾಸ್ತಿಯೇ ಹಿಡಿಯಿತು! ಹರಟೆಯಲ್ಲಿ ಮುಳುಗಿದ್ದ ಪರಿ ಇದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹಾರಿದೆವು. ನಾನು ಮತ್ತು ಸಂತೋಷ್ compund ಹತ್ತಿದೆವು, ಹೇಮಂತ್ ನಮ್ಮ ವಿರುದ್ದ ಹಾರಿದ, ವಿಜಯ್ ಪಡಸಾಲೆಯ ಮೆಟ್ಟಿಲೇರಿದ. ಈ ಸಮಯದಲ್ಲಿ blacky ತನ್ನ ಪೌರುಷ ತೋರಿಸಲು ಶುರು ಮಾಡಿತ್ತು! ಹಾವಿನ ಮೇಲೆ ಎರಗಿ ಅದನ್ನು ಮೊದಲು ತನ್ನ ಮುಂಗಾಲಿನಲ್ಲಿ ಕೆಣಕಿ, ಎಳೆದು, ಅದು ಪ್ರತಿರೋಧ ಒಡ್ಡಿದಾಗ ಬಾಯಲ್ಲಿ ಕಚ್ಚಿ ಮೇಲೆತ್ತಿ ಲೋಲಕದಂತೆ ಅಲ್ಲಾಡಿಸಿ ಎಸೆಯಿತು! ಹಾವಿನ ಮರಿ ಎತ್ತ ಹೋಯಿತೊ ತಿಳಿಯದು, blacky ಮನೆಯ ಸುತ್ತಾ ಮೂಸಿ ಮೂಸಿ ಹುಡುಕುತ್ತಿತ್ತು. ನಾವು ಕಾತುರದಿಂದ ಎಲ್ಲಾ ಕಡೆ ನೋಡುತ್ತಿರಲು ಹೂದೋಟದ ಹುಲ್ಲಿನ ಜೊಂಪೆಯಿಂದ ಹಾವು ಹೊರಗೆ ಬಂತು. ಹೇಮಂತ್ ಮತ್ತೆ "ಅಲ್ಲಿ ಅಲ್ಲಿ" ಎಂದು ಕೈತೋರಿಸುತ್ತಾ ಕಿರುಚಿದ. Blacky ಮೊದಲಿಗಿಂತ ಜಾಸ್ತಿ ರೊಚ್ಚಿಗೆದ್ದು ಅದರ ಮೇಲೆ ಎರಗಿತು! ಈ ನಾಯಿಗಳೆ ಹೀಗೆ. ಅವುಗಳ ಒಡೆಯ ಅಥವಾ ಹಿತೈಷಿಗಳು ಜೊತೆಯಲ್ಲಿದ್ದರೆ ಅದೆಷ್ಟು ಧೈರ್ಯ ಬರುತ್ತದೊ ಅವಕ್ಕೆ. ಈ ಸನ್ನಿವೇಶದಲ್ಲಿ ಎಲ್ಲರೂ ಇದ್ದರು! ಆದರೆ ಇಂಥಃ ಆಕ್ರಮಣಶೀಲ ಸಮಯದಲ್ಲಿ ಅವಕ್ಕೆ ಏನು ನಡೆಯುತ್ತಿರುತ್ತದೊ ಗೊತ್ತಾಗದು. ಎರಡನೆ ಬಾರಿ ಎರಗಿ ಮತ್ತೆ ತನ್ನ ಲೋಲಕ ಪ್ರತಿಭೆ ಪ್ರದರ್ಶಿಸುತ್ತಿರಬೇಕಾದರೆ ಹಾವು ಅದರ ಬಾಯಿಂದ ಉಡಾವಣೆಯಾಗಿ ವಿಜಯ್ ಬೆನ್ನಿಗೆ ಬಡಿದು ಕೆಳಕ್ಕೆ ನೆಲೆಗೊಂಡಿತು! ವಿಜಯ್‌ಗೆ ಆ ಸಮಯದಲ್ಲಿ ಹೇಗೆ ಭಾಸವಾಯಿತೋ ಅವನೇ ಬಲ್ಲ. ಅವನು ಹಾವು ಮನೆಯೊಳಗೆ ನುಗ್ಗದೆ ಇರಲಿ ಎಂದು ಮುಂಬಾಗಿಲು ಮುಚ್ಚಿದ. Blackyಗೆ ಹಾವು ಬಿದ್ದಿರುವ ಜಾಗ ತಿಳಿಯದೆ ಸುತ್ತಲೂ ಗುರ್ರೆನ್ನುತ್ತಾ ಹುಡುಕುತ್ತಿತ್ತು. ನಾನು ನಾಯಿಯನ್ನು ಮೊದಲು ಯಾರಾದರು ಹಿಡಿದುಕೊಳ್ಳಿ ಎಂದು ಕಿರುಚಿದೆ. Blackyಯನ್ನು ಹೇಮಂತ್ ಹಿಡಿದುಕೊಂಡ. ಹಾವು ಬಿದ್ದಾಕ್ಷಣ ತುಸುವು ಅಲ್ಲಾಡದೆ ಸತ್ತಂತೆ ನಟಿಸಲು ಶುರು ಮಾಡಿತ್ತು. ನಾನು ವಿಜಯ್‌ಗೆ ಕೋಲು ಕೊಡಲು ಹೇಳಿದೆ. ವಿಜಯ್ ಮನೆಯೊಳಗೆ ಹೋಗಿ ಹುಡುಕಿ ಕೋಲು ಸಿಗದೆ ಪೊರಕೆ ಹಿಡಿದು ಬಾಗಿಲ ಬಳಿ ಬಂದು ನಿಂತನು. ಅವನಿಗೆ ಹಾವು ಎಲ್ಲಿದೆಯೋ ತಿಳಿಯದೆ ಬಾಗಿಲಿನಿಂದ ಹೊರಕ್ಕೆ ಬರಲೇ ಇಲ್ಲ. ಕೆಳಗೆ ಹಾವು, compoundನ ಮೇಲೆ ನಾನು ಹಾಗು ಸಂತೋಷ್. ಸಂತೋಷ್ ಇಳಿಯುವ ಹಾಗೆ ಕಾಣಿಸಲಿಲ್ಲ, ನಿಜವಾಗಿಯೂ ಭಯವಾಗಿತ್ತು. ಕೊನೆಗೆ ಧೈರ್ಯ ಮಾಡಿ ಇಳಿದು ಪೊರಕೆ ಪಡೆದುಕೊಂಡು ಹಾವನ್ನು ತಳ್ಳಲು ಶುರು ಮಾಡಿದೆ, ಹಾವು ಒಂದು ಚೂರು ಅಲ್ಲಾಡುತ್ತಿರಲಿಲ್ಲ. ಉಸಿರನ್ನು ಬಿಗಿ ಹಿಡಿದು ನಟಿಸುತ್ತಿರುವ ಹಾಗೆ ಅನಿಸುತ್ತಿತ್ತು. ಅದನ್ನು gateನಿಂದ ಹೊರಕ್ಕೆ ತಳ್ಳಿ ಹುಲ್ಲಿನ ಬಳಿ ಬಿಟ್ಟೆ. Blacky ಇನ್ನೂ ತಿಂದೇಹಾಕುವ ಹಾಗೆ ಗುರುಗುಟ್ಟುತ್ತಲೇ ಇತ್ತು. ನನಗೆ ಹಾವು ಖಂಡಿತ ನಟಿಸುತ್ತಿದೆ ಎನಿಸಿತ್ತು, ಅದರ ದೇಹವನ್ನು ಪೂರ್ತಿ ಗಮನಿಸಿದ್ದೆ ಎಲ್ಲು ಗಾಯವಾಗಿರಲಿಲ್ಲ. ಹುಲ್ಲಿನ ಮೇಲೆ ಬಿಟ್ಟ ಸ್ವಲ್ಪ ಸಮಯದ ನಂತರ ವೇಗವಾಗೆ ರಸ್ತೆ ದಾಟಿ ಇನ್ನೊಂದು ಬದಿ ಸೇರಿತು. ಎಲ್ಲರಿಗು ಸಾವಿನ ಸುಳಿಯಿಂದ ಹೊರಬಂದ ಹಾಗಾಗಿತ್ತು. ಮರಿ ಹಾವಿನ ವಿಷ, ಅದರಲ್ಲು ಕಟ್ ಹಾವಿನ ಮರಿ ನಿಜವಾಗಿಯೂ ಅಪಾಯವೆ. ಎಲ್ಲರು ಒಬ್ಬೊಬ್ಬರು ಹೆದರಿದ್ದ ರೀತಿಯನ್ನು ಗೇಲಿ ಮಾಡುತ್ತಾ, ಉತ್ಪ್ರೇಕ್ಷೆಯಾಗೆ ಹೇಮಂತನ ನೃತ್ಯವನ್ನು ಗೇಲಿ ಮಾಡುತ್ತಾ ಮತ್ತೆ ಹರಟೆಗೆ ಕುಳಿತೆವು! ಮುಂದಿನ ತಾಸಿನ ಹರಟೆ ಈ ಹಾವಿನ ಬಗ್ಗೆ ಹಾಗು ನಮ್ಮ blacky ಮಾಡಿದ ಅವಾಂತರದ ಬಗ್ಗೆ ನಡೆಯಿತು! ನಾನು ಈ ಮೊದಲೆ ಹೇಳಿದ ಹಾಗೆ ವಿಜಯ್ ಮನೆಯಲ್ಲಿರಬೇಕಾದರೆ ಪಂಚೆ - ಬನಿಯನ್‌ನಲ್ಲಿರುವುದು ರೂಢಿ. Blacky ಎರಡನೆ ಬಾರಿ ಹಾವನ್ನು ಎಸೆದಾಗ ಅದು ವಿಜಯ್ ಬೆನ್ನಿಗೆ ಬಡಿದಿತ್ತು. ಹಾವು ಸ್ವಲ್ಪ ಮೇಲೆ ಹಾರಿ ಅದು ಅವನ ಬನಿಯನ್ ಒಳಗೆ ಬಿದ್ದಿದ್ದರೆ! ಇದು ನನ್ನ ತಲೆಯಲ್ಲಿ ಸಂಚರಿಸಲು ನನಗೆ ನಿಜವಾದ ದಿಗಿಲು ಶುರುವಾಗಿತ್ತು! ಹಾಗು ಹರಟೆಯಲ್ಲಿ ಇದನ್ನು ಪ್ರಸ್ತಾಪಿಸಲು ಎಲ್ಲರಿಗೂ ನಿಜವಾಗಿಯೂ ದಿಗಿಲಾಯಿತು!
No comments:
Post a Comment